Loan: ತಕ್ಷಣ ಸಾಲ ಬೇಕು? ಇಲ್ಲಿ ನಿಮಗೆ 0 ಕ್ರೆಡಿಟ್ ಸ್ಕೋರ್ ಇದ್ದರು ಸಾಲ ಸಿಗುತ್ತೆ!
ತಕ್ಷಣವೇ ಹಣದ ಅವಶ್ಯಕತೆ ಇದೆಯಾ? ನಿಮಗೆ ಲೋನ್ (Loan) ಪಡೆಯುವ ಹಲವಾರು ಮಾರ್ಗಗಳಿದ್ದರೂ, ಎಲ್ಲಾ ಲೋನ್ ಗಳು ಸುರಕ್ಷಿತವಲ್ಲ. ಕೆಲವು ಹೆಚ್ಚಿನ ಬಡ್ಡಿ ದರಗಳು, ಹೆಚ್ಚಿನ ಶುಲ್ಕಗಳು, ಕಡಿಮೆ ಮರು ಪಾವತಿ ಅವಧಿ ಹೊಂದಿರಬಹುದು, ಆದ್ದರಿಂದ ನೀವು ಲೋನ್ ಆಯ್ಕೆ ಮಾಡುವ ಮುನ್ನ ಒಮ್ಮೆ ಎಲ್ಲವನ್ನು ಪರಿಗಣಿಸಿ.
ಕ್ರೆಡಿಟ್ ಚೆಕ್ ಇಲ್ಲದ ಲೋನ್ ಎಂದರೇನು?
Credit History ಇಲ್ಲದವರಿಗೂ ಅಥವಾ ಕಡಿಮೆ ಲೋನ್ ನೀಡಲು ಈ ಆಯ್ಕೆ ಸಹಾಯಕವಾಗಿದೆ, ಲ್ಯಾಂಡರ್ ಗಳು ಅಥವಾ ಬ್ಯಾಂಕುಗಳು ನಿಮ್ಮ ಆದಾಯ, ಉದ್ಯೋಗ ಸ್ಥಿತಿ ಹಾಗೂ ಮರುಪಾವತಿಯ ಸಾಮರ್ಥ್ಯವನ್ನು ಆಧರಿಸಿ ಲೋನ್ (Loan Without credit history) ನೀಡುತ್ತದೆ, ಆದರೆ ಇದು ಹೆಚ್ಚಿನ ಬಡ್ಡಿದರ ಹೊಂದಿರುವ ಸಾಧ್ಯತೆ ಇದೆ.
ಪೇಡೇ (Payday) ಲೋನ್ಗಳು
Payday ಲೋನ್ ಅಂದರೆ ಸಮಯ ಬರುವ ಮುನ್ನವೇ ವೇತನ ಪಡೆಯುವುದು, ಆದರೆ ಇದರ ಬಡ್ಡಿದರ ಹೆಚ್ಚು, ಪ್ರೊಸೆಸಿಂಗ್ ಶುಲ್ಕವು ಕೂಡ ಹೆಚ್ಚು, ಸಕಾಲಕ್ಕೆ ಪಾವತಿಸದಿದ್ದರೆ ಲೇಟ್ ಪೆನಾಲ್ಟಿಯನ್ನು (Late Fee) ವಿಧಿಸಲಾಗುತ್ತದೆ.
ಫಿನ್ಟೆಕ್ ಲೆಂಡರ್ಗಳ ಮೂಲಕ ಲೋನ್ – ಡಿಜಿಟಲ್ ಪ್ರಕ್ರಿಯೆ;
ಪಿಂಟೆಕ್ ಕಂಪನಿಗಳು ಆನ್ಲೈನ್ ಮೂಲಕ ತೋರಿದ ಸಾಲವನ್ನು ಒದಗಿಸುತ್ತದೆ, ಆದರೆ ನಿಮ್ಮ ಉದ್ಯೋಗ ಸ್ಥಿತಿ, ಆದಾಯ, ಹಣಕಾಸು ನಡವಳಿಕೆ ಮೌಲ್ಯಮಾಪನಕ್ಕೆ ಒಳಗಾಗುತ್ತದೆ. ಕೆಲವೊಂದು ಕಂಪನಿಗಳು ಕ್ರೆಡಿಟ್ ಚೆಕ್ ಮಾಡುವ ಬದಲು ನಿಮ್ಮ ಆರ್ಥಿಕ ನಿರ್ವಹಣೆಯನ್ನು ಪರೀಕ್ಷಿಸುತ್ತದೆ.
ಗೋಲ್ಡ್ ಲೋನ್ ಅಥವಾ ಸೆಕ್ಯೂರ್ಡ್ (Secured) ಲೋನ್
ನಿಮ್ಮ ಚಿನ್ನವು(Gold) ಫಿಕ್ಸೆಡ್ ಡಿಪಾಸಿಟ್ (Fixed Deposit) ಅಥವಾ ಇತರೆ ಆಸ್ತಿಗಳನ್ನು ಅಡವಿಟ್ಟುಕೊಂಡು ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಬಹುದು. ಕ್ರೆಡಿಟ್ ಹಿಸ್ಟರಿ ಇಲ್ಲದವರಿಗೆ ಇದು ಉತ್ತಮವಾದ ಆಯ್ಕೆ.
ಉದ್ಯೋಗಸ್ಥರಿಗೆ ವೇತನದ ಮುಂಚಿತ ಪಾವತಿ
ಕೆಲವು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮುಂದಿನ ತಿಂಗಳ ವೇತನವನ್ನು ಮುಂಚಿತವಾಗಿ ಪಡೆಯುವ ಅವಕಾಶವನ್ನು ನೀಡುತ್ತದೆ, ಇದೆ Payday ಲೋನ್ ಗಳಿಗಿಂತ ಕಡಿಮೆ ವೆಚ್ಚದಲ್ಲಿ ಪಡೆಯಬಹುದು.
ಪೀರ್-ಟು-ಪೀರ್ (P2P) ಲೆಂಡಿಂಗ್
ಆನ್ಲೈನ್ ಮೂಲಕ P2P ಲೋನ್ ಪಡೆಯಲು ನೀವು ಖಾಸಗಿ ಲೆಂಡರ್ ಗಳನ್ನು ಸಂಪರ್ಕಿಸಬಹುದು, ಬಡ್ಡಿದರ ಹಾಗೂ ಕೆಲವು ನಿಯಮಗಳ ಒಪ್ಪಂದದ ಪ್ರಕಾರ ಮರುಪಾವತಿ ಬದಲಾಗಬಹುದು.
ಕ್ರೆಡಿಟ್ ಚೆಕ್ ಇಲ್ಲದ ಲೋನ್ಗಳ ಅನಾನುಕೂಲಗಳು
- ಹೆಚ್ಚಿನ ಬಡ್ಡಿದರ,
- ಮರುಪಾವತಿ ಅವಧಿ ಕಡಿಮೆ ಇರುತ್ತದೆ,
- ಹಗರಣ (ಸ್ಕೇಮ್) ಉಂಟಾಗುವ ಸಾಧ್ಯತೆ ಹೆಚ್ಚು,
- ಹೌಸಿಂಗ್ ಚಾರ್ಜ್, ಲೋನ್ ಶುಲ್ಕ(Processing fee) ಇದ್ದೇ ಇರುತ್ತದೆ.
ಯೋಚಿಸಿ ತೀರ್ಮಾನ ತೆಗೆದುಕೊಳ್ಳುವುದು ಉತ್ತಮ!
ಕ್ರೆಡಿಟ್ ಚೆಕ್ ಇಲ್ಲದ ಲೋನ್ ಗಳು, ನಿಮಗೆ ತುರ್ತು ಪರಿಸ್ಥಿತಿಯಲ್ಲಿ ಸಹಾಯವಾಗಬಹುದು, ಆದರೆ ಆಯ್ಕೆಯನ್ನು ಆಯ್ಕೆ ಮಾಡುವ ಮುನ್ನ ಲಾಭ ಮತ್ತು ನಷ್ಟಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ, ನಿಮಗೆ ಉತ್ತಮ ದರ ಹಾಗೂ ಸುಲಭವಾದ ಮರುಪವತಿ ಆಯ್ಕೆ ಹೊಂದಿರುವ ಲೋನ್ ಗಳನ್ನು ಆರಿಸಿ.