PNB LOAN: ಕಡಿಮೆ ಬಡ್ಡಿಗೆ ಸಾಲ! ಮಾರ್ಚ್ 31 ಕೊನೆಯ ಅವಕಾಶ

PNB LOAN: ಕಡಿಮೆ ಬಡ್ಡಿಗೆ ಸಾಲ! ಮಾರ್ಚ್ 31 ಕೊನೆಯ ಅವಕಾಶ

ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ರೇಪು ದರ(Repo rate)ವನ್ನು ಕನಿಷ್ಠ 25 ಬೇಸಿಸ್ ಪಾಯಿಂಟ್ಗಳನ್ನು ಕಡಿತಗೊಳಿಸಿದೆ. ಅದರಂತೆಯೇ ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿಯೂ ಕೂಡ ಸಾಲಗಳ ಮೇಲೆ ಬಡ್ಡಿ ದರಗಳನ್ನು (Intrest Rate) ಕಡಿಮೆ ಮಾಡಲಾಗಿದೆ.

ಈ ರೀತಿಯ ಬಡ್ಡಿದರವು ಫೆಬ್ರವರಿ 10ರಿಂದ ಜಾರಿಗೆ ಬಂದಿದ್ದು, ಈ ಪರಿಷ್ಕೃತ ಬಡ್ಡಿದರಗಳು ಪರ್ಸನಲ್ ಲೋನ್, ಹೋಂ ಲೋನ್, ಕಾರ್ ಲೋನ್, ಎಜುಕೇಶನ್ ಲೋನ್ ಇತ್ಯಾದಿಗಳು ಸೇರಿದಂತೆ ಎಲ್ಲಾ ಸಾಲಗಳಿಗೆ ಅನ್ವಯವಾಗುತ್ತದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಮುಖ್ಯವಾಗಿ ಅಧಿ ಕಡಿಮೆ ಬಡ್ಡಿ ದರದಲ್ಲಿ ವಸತಿ ಸಾಲವನ್ನು ನೀಡುತ್ತದೆ, ವಾರ್ಷಿಕ 8.15 ಪ್ರತಿಶತದಿಂದ ಆರಂಭವಾಗುತ್ತದೆ, 31 ಮಾರ್ಚ್ 2025 ರವರೆಗೆ ತೆಗೆದುಕೊಂಡ ಕೆಲವು ಸಾಲಗಳಿಗೆ ಯಾವುದೇ ಸಂಸ್ಕರಣ ಶುಲ್ಕಗಳು ಅಥವಾ ದಾಖಲೆಯ ಶುಲ್ಕಗಳು ಇರುವುದಿಲ್ಲ. ಕೆಲವು ಸಾಲಗಳನ್ನು 30 ವರ್ಷದವರೆಗೆ ಮರುಪಾವತಿ ಮಾಡುವ ಅವಕಾಶವನ್ನು ಈ ಬ್ಯಾಂಕ್ ನೀಡಿದೆ.

PNB ಡಿಜಿಟಲ್ ವಸತ ಸಾಲಗಳನ್ನು ಸಹ ಮಂಜೂರು ಮಾಡುತ್ತದೆ, ಇದರ ಮೂಲಕವಾಗಿ ಗ್ರಾಹಕರು ಯಾವುದೇ ಒಂದು ಸ್ಥಳದಿಂದ ಡಿಜಿಟಲ್ ರೂಪದಲ್ಲಿ ರೂ. 5 ಕೋಟಿ ವರಗಿನ ವಸತಿ ಸಾಲಗಳನ್ನು ಪಡೆಯಬಹುದು.

ವಸತಿ ಸಾಲಗಳ ಮೇಲಿನ ಬಡ್ಡಿದರವು ವಾರ್ಷಿಕವಾಗಿ, 8.15 ಪ್ರತಿಶತದಿಂದ ಆರಂಭವಾಗುತ್ತದೆ, ಪ್ರತಿ ಒಂದು ಲಕ್ಷ ರೂಪಾಯಿಗೆ 744 ರೂಪಾಯಿಯಂತೆ EMI ಪಾವತಿಸಬೇಕಾಗುತ್ತದೆ. ಈ ಸಾಲುಗಳಿಗೆ ಯಾವುದೇ ಪೂರ್ವ ಪಾವತಿ ದಸ್ತಾವೇಜಿಕರಣ ಶುಲ್ಕ ಅಥವಾ ಸಂಸ್ಕರಣ ಶಲ್ಕಗಳಿಲ್ಲ.

PNB GENNEXT ಸಾಲಗಳು ಸರ್ಕಾರಿ ವಲಯದ ಉದ್ಯೋಗಿಗಳಿಗೆ ಮತ್ತು ಐಟಿ ವೃತ್ತಿಪರ ಉದ್ಯೋಗಿಗಳಿಗೆ ಲಭ್ಯವಿದೆ, ಇವುಗಳನ್ನು ಸುಮಾರು 40 ವರ್ಷದವರಿಗಿನ ಸಂಬಳ ಪಡೆಯುವ ವ್ಯಕ್ತಿಗಳಿಗೆ ನೀಡಲಾಗುತ್ತದೆ, ಈ ಸಾಲುಗಳ ಮೇಲೆ ಶೇಕಡ 8.15 ರಷ್ಟು ಬಡ್ಡಿದರವನ್ನು ವಿಧಿಸಲಾಗುತ್ತದೆ, EMI ಗಳನ್ನು 30 ವರ್ಷಗಳವರೆಗೆ ಪಾವತಿಸುವ ಅವಕಾಶವಿದೆ.

PNB MAX SAVER ಹೆಚ್ಚಿನ ಆದಾಯದ ಗುಂಪುಗಳಿಗೆ ನೀಡುವ ವಸತಿ ಸಾಲದ ಯೋಜನೆಯಾಗಿದೆ. ಇದರ ಬಡ್ಡಿದರವು ಶೇ.8.30 ರಿಂದ ಆರಂಭವಾಗುತ್ತದೆ, ಇವುಗಳನ್ನು 31 ಮಾರ್ಚ್ 25ರ ವರೆಗೆ ಯಾವುದೇ ದಾಖಲಾತಿ ಶುಲ್ಕ ಹಾಗೂ ಸಂಸ್ಕರಣ ಶುಲ್ಕವಿಲ್ಲದೆ ಪಡೆಯಬಹುದು.

PNB DIGITAL CAR LOAN ಈ ಯೋಜನೆಯಡಿಯಲ್ಲಿ ನೀವು ಗರಿಷ್ಠ ರೂ.20 ಲಕ್ಷದವರೆಗೆ ಸಾಲಗಳನ್ನು ಪಡೆಯಬಹುದು, ಇದಕ್ಕೆ ಶೇಕಡವಾಗಿ 8.50 ರಷ್ಟು ಬಡ್ಡಿ ದರವಿರುತ್ತದೆ, ತಿಂಗಳಿಗೆ ರೂ.1240 EMI ಪಾವತಿಸಬೇಕು, ಇನ್ನು ವೈಯಕ್ತಿಕ ಸಾಲಗಳ ಮೇಲೆ ಬಡಿದರವು ಶೇಕಡ 11.25 ಎಷ್ಟು ಬಡ್ಡಿಯನ್ನು ವಿಧಿಸುತ್ತದೆ.

 

Leave a Comment