Samsung 5G Smartphone| ಬಡವರಿಗಾಗಿಯೇ ಕಡಿಮೆ ಬೆಲೆಯ 5G ಫೋನ್ ಬಿಡುಗಡೆ ಮಾಡಿದ ಸ್ಯಾಮ್ಸಂಗ್

Samsung 5G Smartphone| ಬಡವರಿಗಾಗಿಯೇ ಕಡಿಮೆ ಬೆಲೆಯ 5G ಫೋನ್ ಬಿಡುಗಡೆ ಮಾಡಿದ ಸ್ಯಾಮ್ಸಂಗ್

Samsung Galaxy F06 5G Smartphone :

ಭಾರತದಲ್ಲಿ ಈಗ 5G ಸೇವೆಗಳು ವೇಗವಾಗಿ ಬೆಳೆಯುತ್ತಿದೆ, ವಿಸ್ತಾರದ ಬೆನ್ನಲ್ಲೇ ತಗ್ಗಿದ ದರದಲ್ಲಿ 5G ಫೋನ್ ನೀಡುವ ಸ್ಪರ್ಧೆಯು ಕೂಡ ಎಲ್ಲೆಡೆ ತೀವ್ರವಾಗಿದೆ. ಕೆಲವು ದಿನಗಳ ಹಿಂದೆ ಹಲವಾರು ಕಂಪನಿಗಳು ರೂ.10,000ಕ್ಕಿಂತ ಕಡಿಮೆ ದರದಲ್ಲಿ 5G ಫೋನ್ಗಳನ್ನು ಬಿಡುಗಡೆ ಮಾಡಿದ್ದರೆ, ಈಗ ಆ ಪೈಪೋಟಿಗೆ Samsung ಕೂಡ ಲಗ್ಗೆ ಇಟ್ಟಿದೆ.

Samsung ಈ ಫೋನ್ ಅನ್ನು ಲಾಂಚ್ ಮಾಡುವ ಮೂಲಕ, 5G ಫೋನ್ಗಳು ಕೇವಲ ಪ್ರೀಮಿಯಂ ಬಳಕೆದಾರರಿಗೆ ಮಾತ್ರವಲ್ಲದೆ, ಸಾಮಾನ್ಯ ಜನರಿಗೂ ತಲುಪಬೇಕು ಎಂಬ ನಿಟ್ಟಿನಲ್ಲಿ Samsung ದೊಡ್ಡ ಹೆಜ್ಜೆಯನ್ನು ಇಟ್ಟಿದೆ.

ಕಡಿಮೆ ಬೆಲೆಯ 5G ಫೋನ್‌

ಸ್ಯಾಮ್ಸಂಗ್ ಕಂಪನಿಯ ಇಂಡಿಯಾದ ಜನರಲ್ ಮ್ಯಾನೇಜರ್ ಅಕ್ಷಯ್ S.Rav ಅವರ ಪ್ರಕಾರ ಈ ಹೊಸ ಸ್ಮಾರ್ಟ್ ಫೋನ್ ಭಾರತದಲ್ಲಿ ಹೆಚ್ಚಿನ ಜನರಿಗೆ 5G ಅನುಭವಿಸಬೇಕು ಎನ್ನುವ ನಿಟ್ಟಿನಲ್ಲಿ ಬಿಡುಗಡೆ ಮಾಡಲಾಗಿದೆ ಎಂದಿದ್ದಾರೆ, 5G ತಂತ್ರಜ್ಞಾನ ಮತ್ತು ದೀರ್ಘಕಾಲಿಕವಾಗಿ ಹೆಚ್ಚಿನ ಜನರಿಗೆ ಲಾಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಭಾರತದಲ್ಲಿ ಮೊಬೈಲ್ ಫೋನ್ ಗಳು ದುಬಾರಿಯಾಗಿರುವ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು, ಕಡಿಮೆ ಆದಾಯವಿರುವ ಬಳಕೆದಾರರು ಕೂಡ 5G ಸೇವೆ ಉಪಯೋಗಿಸಬೇಕು ಎನ್ನುವ ಉದ್ದೇಶದಿಂದ Galaxy F06 5G ಬಿಡುಗಡೆ ಮಾಡಲಾಗಿದೆ. ಕಡಿಮೆ ದರದಲ್ಲಿ ಉತ್ತಮ ಪರ್ಫಾರ್ಮೆನ್ಸ್ ಹೊಂದಿರುವ ಸ್ಮಾರ್ಟ್ ಫೋನ್ ಬೇಕಾದರೆ ಈ ಫೋನ್ ಉತ್ತಮವಾದ ಆಯ್ಕೆಯಾಗಿದೆ.

ಫೋನ್ ವಿಶೇಷತೆಗಳು ಮತ್ತು ವೈಶಿಷ್ಟ್ಯಗಳು

Samsung Galaxy F06 5G ಯ ಪ್ರಮುಖ ಆಕರ್ಷಣೆ ಎಂದರೆ ಇದರ ಬೆಲೆಯಾಗಿದೆ. ಕೇವಲ ರೂ.9499 ಅಕ್ಕೆ ಸಿಗುವ ಈ ಫೋನ್ ಉತ್ತಮ ಸ್ಪೆಸಿಫಿಕೇಶನ್ ಗಳನ್ನು ಒಳಗೊಂಡಿದೆ. 5G ಬೆಂಬಲದ ಜೊತೆಗೆ ಉತ್ತಮವಾದ ಕ್ಯಾಮರಾ ಹಾಗೂ ಪ್ರಬಲವಾದ ಪ್ರೊಸೆಸರ್ ಮತ್ತು ಚಿರಸ್ಥಾಯಿಯಾದ ಉತ್ತಮ ಬ್ಯಾಟರಿ ಹೊಂದಿದೆ.

ಈ ಫೋನಿನಲ್ಲಿ ಉತ್ತಮ ಗುಣಮಟ್ಟದ Display, ವೇಗವಂತ ಕಾರ್ಯಕ್ಷಮತೆ, ಉತ್ತಮ ಕ್ಯಾಮೆರಾ ಗುಣಮಟ್ಟ ಮತ್ತು ದೊಡ್ಡ ಬ್ಯಾಟರಿ ಸೌಲಭ್ಯವಿದೆ. ಇದು ಮಾರುಕಟ್ಟೆಯಲ್ಲಿರುವ ಇತರೆ ಕಂಪನಿಗಳ 5G ಫೋನ್ಗಳಿಗೆ ಹೋಲಿಸಿದರೆ ಬೆಲೆ ಹಾಗೂ ಇತರೆ ವೈಶಿಷ್ಟ್ಯಗಳ ದೃಷ್ಟಿಯಿಂದ ಇದು ಹೆಚ್ಚಿನ ಆಕಾಶಕವಾಗಿದೆ.

Samsung ಈ 5G ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿಯೇ ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ತನ್ನ ಪ್ರಭಾವವನ್ನು ಇನ್ನಷ್ಟು ಬಲಪಡಿಸಲು ಮುಂದಾಗಿದೆ. Samsung Galaxy F06 5G ಉತ್ತಮ ಕಾರ್ಯಕ್ಷಮತೆ ಮತ್ತು ಸಂಪರ್ಕವನ್ನು ನೀಡುವುದರ ಜೊತೆಗೆ, ಕಡಿಮೆ ಬೆಲೆಯಲ್ಲಿ 5G ಅನುಭವ ನೀಡಲು ಸಹಾಯವಾಗಲಿದೆ.

ಭಾರತದಲ್ಲಿ 5G ಸೇವೆಗಳು ಇನ್ನು  ಪೂರ್ಣ ಪ್ರಮಾಣದಲ್ಲಿ ಹರಡಿಲ್ಲ, ಆದರೆ ಕೆಲವು ನಗರಗಳಲ್ಲಿ ಮಾತ್ರ 5G ಸೇವೆಗಳು ಲಭ್ಯವಿದೆ. ಈ ಹಿನ್ನೆಲೆಯಲ್ಲಿ ಕಡಿಮೆ ಬಜೆಟ್ ನಲ್ಲಿ 5G ಫೋನ್ ಬಿಡುಗಡೆ ಮಾಡಿದ Samsung, ತನ್ನ ಪ್ರಭಾವವನ್ನು ಮಾರುಕಟ್ಟೆಯಲ್ಲಿ ಮತ್ತಷ್ಟು ವಿಸ್ತರಿಸಲು ಮುನ್ನಗುತಿದೆ.

 

WhatsApp Group Join Now
Telegram Group Join Now

Leave a Comment

copy
share with your friends.