Gruhalakshmi Scheme| ಗೃಹಲಕ್ಷ್ಮಿ ಹಣ ಕ್ಯಾನ್ಸಲ್? ಇಂತಹ ಮಹಿಳೆಯರಿಗಿಲ್ಲಾ ಗೃಹಲಕ್ಷ್ಮಿ ಭಾಗ್ಯ!

Gruhalakshmi Scheme| ಗೃಹಲಕ್ಷ್ಮಿ ಹಣ ಕ್ಯಾನ್ಸಲ್? ಇಂತಹ ಮಹಿಳೆಯರಿಗಿಲ್ಲಾ ಗೃಹಲಕ್ಷ್ಮಿ ಭಾಗ್ಯ!

ರಾಜ್ಯ ಸರ್ಕಾರವು ನಿಯಮಗಳನ್ನು ಮೀರಿ ರೇಷನ್ ಕಾರ್ಡ್(Ration Card) ಪಡೆದವರ ಪಟ್ಟಿಯನ್ನು ಗುರುತಿಸುತ್ತಿದ್ದು, ಅಂಥವರ ಪಡಿತರ ಚೀಟಿಯನ್ನು ಈಗ ರದ್ದು ಮಾಡಲಾಗುತ್ತದೆ. ಒಂದು ವೇಳೆ ಆ ರೀತಿಯ BPL CARD ರದ್ದಾದರೆ ಅನ್ನಭಾಗ್ಯ ಯೋಜನೆಯ ಹಣ ಸೇರಿದಂತೆ, ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಹಣ ಕೂಡ ಸಿಗುವುದಿಲ್ಲ.

ರೇಷನ್ ಕಾರ್ಡ್ ಅಥವಾ ಪಡಿತರ ಚೀಟಿ ಸರ್ಕಾರದ ಎಲ್ಲಾ ಯೋಜನೆಗಳಿಗೆ ಬಹುಮುಖ್ಯವಾದ ದಾಖಲೆಯಾಗಿದೆ, ಒಂದು ವೇಳೆ ಈ ಕಾರ್ಡ್ ರದ್ದಾದರೆ ನಿಮಗೆ ಯಾವುದೇ ಸರ್ಕಾರಿ ಯೋಜನೆಗಳು ದೊರೆಯುವುದಿಲ್ಲ. ಒಂದು ವೇಳೆ ತಪ್ಪಾಗಿ ನಿಮ್ಮ ಕಾರ್ಡ್ ಕೂಡ ರದ್ದಾದರೆ ನೀವು ಆಹಾರ ಇಲಾಖೆಗೆ ತೆರಳಿ ಸೂಕ್ತ ದಾಖಲೆಗಳನ್ನು ನೀಡಿ ಪಡಿತರ ಚೀಟಿಯನ್ನು ಮರುಪಡೆಯಬಹುದು.

ಅನರ್ಹರ ಪಟ್ಟಿಯನ್ನು ಚೆಕ್ ಮಾಡುವುದು ಹೇಗೆ ?

https://ahara.karnataka.gov.in/Home/EServices

ಅನರ್ಹರ ಪಟ್ಟಿಯನ್ನು ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಅನ್ನು ಮೇಲೆ ನೀಡಲಾಗಿದೆ.

  • ಮೊದಲು ಮೇಲೆ ನೀಡಿದ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
  • ನಂತರ ಕಾಣಿಸುವ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ, e-ration card ಎಂಬ ಆಯ್ಕೆ ಯಲ್ಲಿನ Show suspend list/cancelled ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ನಂತರ ನಿಮ್ಮ ಜಿಲ್ಲೆ, ತಾಲೂಕು ಮತ್ತು ಗ್ರಾಮವನ್ನು ಆಯ್ಕೆ ಮಾಡಬೇಕು.
  • ನಂತರ ನೀವು ಅನರ್ಹರ ಪಟ್ಟಿಯನ್ನು ನೋಡಬಹುದು, ಇದರಲ್ಲಿ ರದ್ದಾಗಿರುವ ಕಾರಣವನ್ನು ನೀವು ನೋಡಬಹುದು.

ಪೆಂಡಿಂಗ್ ಹಣ ಜಮೆ ಯಾವಾಗ?

ಬಾಕಿರುವ ಗೃಹಲಕ್ಷ್ಮಿ ಹಣವನ್ನು, ನಾಳೆಯಿಂದಲೇ ಈ ಎರಡು ತಿಂಗಳ ಗೃಹಲಕ್ಷ್ಮಿ ಯೋಜನೆ ಹಣ ಪಾವತಿ ಶುರುವಾಗಲಿದೆ. ಅಲ್ಲದೆ ಕೆಲವು ಜಿಲ್ಲೆಗಳಲ್ಲಿ ಮೂರು ತಿಂಗಳ ಹಣವು ಕೂಡ ಬಾಕಿ ಇದ್ದು, ಎಲ್ಲಾ ಹಣವನ್ನು ಒಮ್ಮೆ ಪಾವತಿ ಮಾಡಲು ಸರ್ಕಾರವು ಸಿದ್ಧತೆಯನ್ನು ನಡೆಸಿದೆ. ಸರ್ಕಾರವು ಇನ್ನು ಮುಂದೆ ಈ ರೀತಿಯ ವಿಳಂಬವನ್ನು ತಪ್ಪಿಸಲು ಹೊಸ ಯೋಜನೆಯನ್ನು ರೂಪಿಸಿದ್ದು, ತಾಲೂಕು ಪಂಚಾಯತ್ ಮೂಲಕ ಮಹಿಳೆಯರಿಗೆ ಹಣ ತಲುಪಿಸುವ ಕಾರ್ಯಕ್ಕೆ ಮುಂದಾಗಲು ಚಿಂತನೆಯನ್ನು ನಡೆಸಿದೆ.

ಖಾತೆಗೆ ಹಣ ಜಮೆ ಆಗುವುದರ ಬಗ್ಗೆ ತಿಳಿಯುವುದು ಹೇಗೆ?

ಗೃಹಲಕ್ಷ್ಮಿ ಹಣ ಬಂದಿದೆಯ ಇಲ್ಲ ಎನ್ನುವುದನ್ನು ಹೇಗೆ ನೋಡುವುದಾದರೆ, ಯೋಜನೆಗೆ ಅರ್ಜಿ ಸಲ್ಲಿಸುವಾಗ ಮೊಬೈಲ್ ನಂಬರ್ ಗೆ ಯೋಜನೆಯ ಜಮಾ ಆಗಿರುವ ಎಸ್ಎಂಎಸ್ ರವಾನೆ ಆಗಲಿದೆ, ಎಸ್ಎಂಎಸ್ ಅನ್ನು ಮೊದಲು ಪರಿಶೀಲಿಸಿ.

ಒಂದು ವೇಳೆ ನೀವು ಎಸ್ಎಮ್ಎಸ್ ಸ್ವೀಕರಿಸದಿದ್ದಲ್ಲಿ ಆನ್ಲೈನ್ ಬ್ಯಾಂಕಿಂಗ್ ಮೂಲಕ ಪಾವತಿಯನ್ನು ಚೆಕ್ ಮಾಡಬಹುದು. ಆನ್ಲೈನ್ ನಲ್ಲಿ ಮೊಬೈಲ್ ಮೂಲಕ ನೋಡಬಹುದು ಇಲ್ಲವೇ ನೇರವಾಗಿ ಪಾಸ್ ಬುಕ್ ಎಂಟ್ರಿ ಮಾಡಿಸಿ ತಿಳಿಯುತ್ತದೆ.

 

WhatsApp Group Join Now
Telegram Group Join Now

Leave a Comment

copy
share with your friends.