Gruhalakshmi Scheme: 3 ತಿಂಗಳ ಪೆಂಡಿಂಗ್ ಇರುವ ಗ್ರಹಲಕ್ಷ್ಮಿ ಯೋಜನಾ ಹಣ ಜಮಾ ಯಾವಾಗ? ಇಲ್ಲಿದೆ ಬಿಗ್ ಅಪ್ಡೇಟ್!
ನೂತನ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಜನಪ್ರಿಯ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಹಣ ಪಾವತಿ ವಿಧಾನದಲ್ಲಿ ಬದಲಾವಣೆ ಮಾಡಲು ಸರ್ಕಾರವು ಸಿದ್ಧತೆಯನ್ನು ನಡೆಸುತ್ತಿದೆ. ಹೊಸ ಬದಲಾವಣೆಗಳ ಮೂಲಕ ಫಲಾನುಭವಿಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡುವ ಬದಲು ತಾಲೂಕು ಪಂಚಾಯಿತಿ ಮೂಲಕ ಹಣ ವಿತರಿಸುವ ಸಿದ್ಧತೆಯನ್ನು ನಡೆಸುತ್ತಿದೆ.
ರಾಜ್ಯ ಸರ್ಕಾರದ ಈ ಹೊಸ ಬದಲಾವಣೆಯಿಂದಾಗಿ, ಯೋಜನೆಯ ನಿರ್ವಹಣಾ ಹೊರೆ ಕಡಿಮೆಯಾಗಲಿದೆ, ಎನ್ನುತ್ತಿದ್ದರು ಸಹ ಫಲಾನುಭವಿಗಳಿಗೆ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಚರ್ಚೆ ಹೆಚ್ಚಾಗಿದೆ.
ಇತ್ತೀಚಿನ ಕೆಲ ತಿಂಗಳುಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣ ಪಾವತಿ ವಿಳಂಬವಾಗಿರುವುದು ಮಹಿಳೆಯರಲ್ಲಿ ನಿರಾಸೆಯನ್ನು ಉಂಟುಮಾಡಿದೆ. ಈ ಯೋಜನೆಯ ಹಣದ ಪಾವತಿಯ ಆಡಳಿತಾತ್ಮಕ ಸಮಸ್ಯೆಗಳನ್ನು ಸರಿಪಡಿಸಲು ಸರ್ಕಾರವು ಈ ರೀತಿಯ ಬದಲಾವಣೆಗಳನ್ನು ಪರಿಗಣಿಸುತ್ತಿದೆ.
ಈಗಾಗಲೇ ಮೂರು ತಿಂಗಳ ಗೃಹಲಕ್ಷ್ಮಿ ಹಣ ಲಭ್ಯವಾಗದ ಕಾರಣದಿಂದಾಗಿ, ಮಹಿಳೆಯರು ಸರ್ಕಾರದ ಈ ಹೊಸ ನಿರ್ಧಾರದ ಬಗ್ಗೆ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ.
ಪಾಲನಾತ್ಮಕವಾದ ಬದಲಾವಣೆಯ ಹಿನ್ನೆಲೆಯಲ್ಲಿ ಈ ಯೋಜನೆಯ ಹಣವನ್ನು ರಾಜ್ಯ ಕಾರ್ಯದರ್ಶಿಯ ಮೂಲಕ ಹತ್ತಿರದ ತಾಲೂಕು ಪಂಚಾಯಿತಿಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ.
ಜಿಲ್ಲೆಯ ಆಯಾ ತಾಲೂಕು ಪಂಚಾಯಿತಿಗಳಿಂದ ನೇರವಾಗಿ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಲಿದೆ, ಇದರಿಂದ ಸರ್ಕಾರಕ್ಕೆ ಜವಾಬ್ದಾರಿಯ ಹಂಚಿಕೆ ಹೆಚ್ಚು ಸಮರ್ಥವಾಗಬಹುದು, ಹೊಸ ಬದಲಾವಣೆಯಿಂದ ಭ್ರಷ್ಟಾಚಾರದ ಅನುಮಾನವು ಎದುರಾಗಬಹುದಾಗಿದೆ.
ಹಣ ಪಾವತಿಯ ವಿಳಂಬ ಎದುರಾದ ಬೆನ್ನಲ್ಲೇ, ಹಲವಾರು ಮಹಿಳೆಯರು ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯು ನೇರವಾಗಿ ಖಾತೆಗೆ ಹಣ(Bank Account) ವರ್ಗಾವಣೆ ಮಾಡುತ್ತಿದೆ, ಇದೆ ಮಾದರಿಯಲ್ಲಿ ಮುಂದುವರಿಯಬೇಕು ಎಂದು ಕೆಲವರು ಒತ್ತಾಯಿಸುತ್ತಿದ್ದಾರೆ. ರಾಜ್ಯ ಸರ್ಕಾರದಿಂದ ಈ ಹೊಸ ರೀತಿಯ ಅಧಿಕೃತ ಘೋಷಣೆಯನ್ನು ನಿರೀಕ್ಷಿಸಲಾಗುತ್ತಿದೆ.
ಪೆಂಡಿಂಗ್ ಹಣ ಬಿಡುಗಡೆ
ಇಂದು ಬಾಕಿ ಇರುವ ಹಣವನ್ನು ಹಂತಹಂತವಾಗಿ ಬಿಡುಗಡೆ ಮಾಡಲು ಸಿದ್ಧತೆಯನ್ನು ನಡೆಸಲಾಗುತ್ತಿದೆ, ಈಗಾಗಲೇ ಬಿಡುಗಡೆಯ ಕಾರ್ಯವು ಶುರುವಾಗಿದ್ದು ವಾರದ ಅಂತ್ಯದಲ್ಲಿ ಮಹಿಳೆಯರ ಬ್ಯಾಂಕ್ ಖಾತೆಯನ್ನು(Bank Account) ತಲುಪಲಿದೆ. ಎಲ್ಲಾ ಜಿಲ್ಲೆಗಳಿಗೂ ಒಂದೇ ಸಮನೆ ಹಣವನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲದ ಕಾರಣ ಎಲ್ಲಾ ಜಿಲ್ಲೆಗಳಿಗೂ ಹಂತ ಹಂತವಾಗಿ ಹಣ ಬಿಡುಗಡೆ ಆಗಲಿದೆ. ಜೊತೆಗೆ ಹಣ ಬಿಡುಗಡೆಯಾಗಿರುವ ವಿಳಂಬಕ್ಕೆ ಕಾರಣವೇನೆಂದರೆ, ಹೊಸ ಬದಲಾವಣೆ ತಂತ್ರಗಳಿಂದ ತಡವಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಕೆಲವು ಮಹಿಳೆಯರಿಗೆ ಈ ತಿಂಗಳ 15ರಂದು ಹಣ ಅವರ ಬ್ಯಾಂಕ್ ಖಾತೆಗೆ ತಲುಪುವ ನಿರೀಕ್ಷೆ ಇದೆ, ಹಾಗೂ ಈ ಪ್ರಕ್ರಿಯೆ ಈ ತಿಂಗಳೊಳಗೆ ಎಲ್ಲಾ ಜಿಲ್ಲೆಗಳಿಗೆ ಪೂರ್ಣಗೊಳ್ಳಲಿದೆ.