BPL CARD ಹೊಂದಿರುವವರಿಗೆ ಇದುವೇ ಕೊನೆಯ ಅವಕಾಶ! ಇಲ್ಲಿದೆ ಸಂಪೂರ್ಣ ಮಾಹಿತಿ.
ನೂತನ ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಲಾಭವನ್ನು ಪಡೆಯಲು ರೇಷನ್ ಕಾರ್ಡ್ (Ration Card) ಪ್ರಮುಖವಾದ ದಾಖಲೆಯಾಗಿದೆ. ಆದರೆ ಹಲವಾರು ಫಲಾನುಭವಿಗಳ ರೇಷನ್ ಕಾರ್ಡಿನಲ್ಲಿ ತೊಂದರೆಗಳಿದ್ದು, ತಪ್ಪಾಗಿ ಮಾಹಿತಿ ನಮೂದಿ ಆಗಿರುವುದು, ವಿಳಾಸದ ಬದಲಾವಣೆ, ಹೊಸ ಸದಸ್ಯರ ಸೇರ್ಪಡೆ ಇತ್ಯಾದಿ ತಿದ್ದುಪಡಿ ಅಗತ್ಯವಿದೆ.
ಈ ಸಮಸ್ಯೆಯನ್ನು ಬಗೆಹರಿಸಲು ರಾಜ್ಯ ಸರ್ಕಾರವು ಪಡಿತರ ಚೀಟಿ (Ration Card) ತಿದ್ದುಪಡಿ(Correction) ಪ್ರಕ್ರಿಯೆಗೆ ಅವಕಾಶವನ್ನು ಕಲ್ಪಿಸಿದೆ. ತಿದ್ದುಪಡಿ ಕಾರ್ಯವು 28 ಫೆಬ್ರವರಿ 2025ರ ಒಳಗೆ ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 4:00 ವರೆಗೆ ಅವಕಾಶವನ್ನು ಕಲ್ಪಿಸಲಾಗಿದೆ.
ಎಲ್ಲಿ ತಿದ್ದುಪಡಿ ಮಾಡಬಹುದು?
- ಕರ್ನಾಟಕ ಒಂದು ಕೇಂದ್ರಗಳು
- ಗ್ರಾಮವನ್ ಕೇಂದ್ರ
- ಬೆಂಗಳೂರು ಒನ್ ಆನ್ಲೈನ್ ಕೇಂದ್ರಗಳು
ಮೇಲೆ ನೀಡಲಾದ ಅಧಿಕೃತ ಕೇಂದ್ರಗಳಿಗೆ ಭೇಟಿ ನೀಡಿ ನಿಮ್ಮ ಪಡಿತರ ಚೀಟಿ ತಿದ್ದುಪಡಿ (Ration Card Update) ಮಾಡಿಕೊಳ್ಳಬಹುದು..
ರೇಷನ್ ಕಾರ್ಡ್ ತಿದ್ದುಪಡಿಯಲ್ಲಿ ಏನು ಬದಲಾವಣೆ ಮಾಡಬಹುದು?
- ವಿಳಾಸ ಬದಲಾವಣೆ
- ಹೊಸ ಸದಸ್ಯರ ಸೇರ್ಪಡೆ
- ಅನಗತ್ಯ ಸದಸ್ಯರನ್ನು ತೆಗೆದುಹಾಕುವುದು
- E-KYC ಪ್ರಕ್ರಿಯೆ ಮಾಡುವುದು
- ನ್ಯಾಯಬೆಲೆ ಅಂಗಡಿ ಬದಲಾವಣೆ
- ಕುಟುಂಬದ ಮುಖ್ಯಸ್ಥರ ಬದಲಾವಣೆ
- ಆಧಾರ್ ಕಾರ್ಡ್ ಲಿಂಕ್ ಮಾಡುವುದು
- ಇತರ ತಿದ್ದುಪಡಿ ಪ್ರಕ್ರಿಯೆಗೆ ಅವಕಾಶ ಕಲ್ಪಿಸಲಾಗಿದೆ.
ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್ (ಎಲ್ಲಾ ಸದಸ್ಯರಿಗೆ)
- ಜಾತಿ ಪ್ರಮಾಣ ಪತ್ರ (ಅಗತ್ಯವಿದ್ದರೆ ಮಾತ್ರ)
- ಆದಾಯ ಪ್ರಮಾಣ ಪತ್ರ (ಅಗತ್ಯವಿದ್ದರೆ ಮಾತ್ರ)
- ಮೊಬೈಲ್ ಸಂಖ್ಯೆ
- 06 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಜನನ ಪ್ರಮಾಣ ಪತ್ರ
- ಇತರೆ ಅಗತ್ಯವಿರುವ ದಾಖಲೆಗಳು
ರಾಜ್ಯ ಸರ್ಕಾರವು ಪಡಿತರ ಚೀಟಿ ತಿದ್ದುಪಡಿ ಮಾಡಲು 28 ಫೆಬ್ರವರಿ 2025 ರ ಒಳಗೆ ಅವಕಾಶವನ್ನು ನೀಡಿದೆ, ಈ ಸೇವೆಯನ್ನು ಹತ್ತಿರವಿರುವ ಕರ್ನಾಟಕ ಒನ್, ಗ್ರಾಮವನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ಪಡೆದುಕೊಳ್ಳಬಹುದು. ಜನರು ತಮ್ಮ ಆಧಾರ್ ಲಿಂಕ್, ಹೊಸ ಸದಸ್ಯರ ಸೇರ್ಪಡೆ, ವಿಳಾಸ , E-kyc, ಮತ್ತಿತರ ಅವಶ್ಯಕತೆಗಳನ್ನು ತಿದ್ದುಪಡಿ ಮಾಡಬಹುದು.