JIO OFFERS| ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ! ಹೀಗೆ ಮಾಡಿ ನೀವು 1500 ರೂ. ಉಳಿಸಿ
ಜಿಯೋ ಕಂಪನಿಯ ಈ ಹೊಸ ವೈಶಿಷ್ಟ್ಯ ವು ಪ್ರತಿ ವರ್ಷ ನಿಮ್ಮ ಹಣವನ್ನು ಉಳಿಸುತ್ತದೆ, ಜಿಯೋದ UPI ಪಾವತಿಯು ದೇಶದ ಯಾವುದೇ ಸ್ಥಳದಲ್ಲಿಯೂ ಕಾರ್ಯ ನಿರ್ವಹಿಸಲಿದೆ. ಈಗ ಸಣ್ಣ ಪಾವತಿಗಳಿಂದ ಹಿಡಿದು ದೊಡ್ಡ ವಹಿವಾಟುಗಳವರೆಗೂ ಎಲ್ಲಾ ಡಿಜಿಟಲ್ ಪಾವತಿ ಗಳಾಗಿವೆ. ವ್ಯಾಪಾರಿಗಳಿಗೆ ಪ್ರತಿ ಬಾರಿಯೂ ವಹಿವಾಟುಗಳನ್ನು ನಿರ್ವಹಿಸಲು ಸಾಧ್ಯವಿಲ್ಲ ಹಾಗಾಗಿ UPI ಸೌಂಡ್ ಬಾಕ್ಸ್ ಗಳು ಬಂದಿದೆ. ಹಾಗಾಗಿ ಇದರಿಂದ ಚಿಕ್ಕ ವ್ಯಾಪಾರಿಗಳು ಕೂಡ UPI ಸೇವೆಯನ್ನು ಬಳಸುತ್ತಾರೆ.
ಆದರೆ ಈ ಸೌಲಭ್ಯಕ್ಕಾಗಿ ಪ್ರತಿ ವರ್ಷವೂ ಸಣ್ಣ ವ್ಯಾಪಾರಿಗಳು, ದಿನಸಿ ವ್ಯಾಪಾರಿಗಳು ಹಾಗೂ ಇತರೆ ವ್ಯಾಪಾರಿಗಳು ರೂ.1500 ಪಾವತಿಸಬೇಕು, ಇದನ್ನು ಪರಿಶೀಲನೆ ಮಾಡಿ ಜನರು ಹಣ ಉಳಿಸಲು Jio ತಂತ್ರಜ್ಞಾನವನ್ನು ಸೇರಿಸಿ ಹೊಸ ಪ್ರಯೋಗ ಮಾಡಿದೆ ಅದು ಪ್ರತಿ ವರ್ಷವೂ ನಿಮ್ಮ ಹಣವನ್ನು ಉಳಿಸಲಿದೆ.
ಇತ್ತೀಚಿಗೆ ಜಿಯೋ ತನ್ನ ಕಂಪನಿಯ Jio Bharat ಫೋನಿಗೆ Jio Soundpay ಎಂಬ ಹೊಸ ವೈಶಿಷ್ಟ್ಯವನ್ನು ಘೋಷಿಸಿದೆ, 5 ಕೋಟಿ ಸಣ್ಣ ಉದ್ಯಮಿಗಳಿಗೆ ಇದನ್ನು ಉಚಿತವಾಗಿ ನೀಡಲಾಗುತ್ತಿದೆ. ತರಕಾರಿ ಮಾರಾಟಗಾರರು, ಕಿರಾಣಿ ಅಂಗಡಿಯವರು, ರಸ್ತೆ ಬದಿಯ ಸಣ್ಣ ಪುಟ್ಟ ರೆಸ್ಟೋರೆಂಟ್ಳಿ ಗಗೆ ಈ ಸೌಲಭ್ಯವು ವಿಶೇಷವಾಗಿ ಉಪಯುಕ್ತವಾಗಲಿದೆ. ಅವರಿಗೆ ಸ್ಮಾರ್ಟ್ ಸುಲಭವಾದ ವ್ಯಾಪಾರ ನಿರ್ವಹಣಾ ಪರಿಹಾರವನ್ನು ಒದಗಿಸುತ್ತದೆ.
Jio Soundpay ವೈಶಿಷ್ಟ್ಯದ ಮೂಲಕ, ಪ್ರತಿ ಯುಪಿಐ ಪಾವತಿಗೆ ಬಹುಭಾಷೆಯ ಆಡಿಯೋ ದೃಢೀಕರಣಗಳನ್ನು ತಕ್ಷಣವೇ ನೀಡಲಾಗುತ್ತದೆ. ಇದರೊಂದಿಗೆ ವ್ಯಾಪಾರಿಗಳು ತಮ್ಮ ವ್ಯವಹಾರಗಳನ್ನು ಇನ್ನು ಸುಲಭವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಸಬಹುದು. ಪ್ರಸ್ತುತ ಸಣ್ಣ ವ್ಯಾಪಾರಿಗಳು ಧ್ವನಿ ಪೆಟ್ಟಿಗೆಗೆ ಪ್ರತಿ ತಿಂಗಳು ರೂ.125 ಪಾವತಿಸುತ್ತಿದ್ದಾರೆ, ಆದರೆ ಈಗ ಉಚಿತವಾಗಿ Jio Soundpay ಮೂಲಕ JioBharta ಬಳಕೆದಾರರು ವಾರ್ಷಿಕವಾಗಿ ರೂ.1500 ರ ವರೆಗೆ ಉಳಿತಾಯ ಮಾಡಬಹುದು.
Jio Bhart ಫೋನ್ ಒಂದು ವರ್ಷದ ಹಿಂದೆಯಷ್ಟೇ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ, ಕೇವಲ ರೂ.699ಕ್ಕೆ ಲಭ್ಯವಿರುವ ಈ ಫೋನ್ ವಿಶ್ವದ ಅತ್ಯಂತ ಅಗ್ಗದ 4G ಫೋನ್ ಆಗಿದೆ, ಹೊಸ ಜಿಯೋ ಭಾರತ್ ಫೋನ್ ಖರೀದಿಸುವ ವ್ಯಾಪಾರಿಯೂ ಆರು ತಿಂಗಳ ಒಳಗೆ ಇದರ ಹಣವನ್ನು ಮರಳಿ ಪಡೆಯಬಹುದು. ಇದರೊಂದಿಗೆ ಜಿಯೋ ಡಿಜಿಟಲ್ ಇಂಡಿಯಾ(Digitel India) ದಲ್ಲಿ ಯಶಸ್ಸು ಸಾಧಿಸಲು ಇನ್ನೊಂದು ಹೆಜ್ಜೆಯನ್ನು ಇಟ್ಟಿದೆ.