Post Office PPF Scheme ನಿಂದ 16 ಲಕ್ಷ ಗಳಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

Post Office PPF Scheme ನಿಂದ 16 ಲಕ್ಷ ಗಳಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

Post Office ಗಳು ಗ್ರಾಹಕರಿಗೆ PPF ಖಾತೆ ಸೇವೆಗಳನ್ನು ಒದಗಿಸುತ್ತಿದೆ, ಈ ಯೋಜನೆಯೆಲ್ಲಿ ಶೆ.7.1 ಎಷ್ಟು ಬಡ್ಡಿದರವನ್ನು ನೀಡಲಾಗುತ್ತದೆ, ಈ ಯೋಜನೆಯಲ್ಲಿ ಹೂಡಿಕೆ(Investment) ಮಾಡಿದ ಮೊತ್ತ ಮತ್ತು ಬಡ್ಡಿಗೆ ಯಾವುದೇ ತೆರಿಗೆ (Tax) ಇರುವುದಿಲ್ಲ.

WhatsApp Group Join Now
Telegram Group Join Now

ಪೋಸ್ಟ್ ಆಫೀಸ್ PPF ಯೋಜನೆ;

ಬಡವರು ಹಾಗೂ ಮಧ್ಯಮ ವರ್ಗದ ಜನರ ಒಳಿತಿಗಾಗಿ Post Office ಹಲವು ಯೋಜನೆಗಳನ್ನು ಜಾರಿಗೆ ತಂದಿದೆ, ದೇಶದಾದ್ಯಂತ ಹೆಚ್ಚಿನ ಗ್ರಾಮೀಣ ವಲಯದಲ್ಲಿ ಪೋಸ್ಟ್ ಆಫೀಸ್ ಗಳು ಮತ್ತು ಅಧಿಕಾರಿಗಳಿದ್ದಾರೆ. ಪೋಸ್ಟ್ ಆಫೀಸ್ ಅಧಿಕಾರಿಗಳು ಜನರಿಗೆ ಅನುಕೂಲವಾಗುವಂತೆ ಈ ರೀತಿಯ ಸೇವೆಗಳನ್ನು ನೀಡುತ್ತಿದ್ದಾರೆ. ಕೆಲವು ಭಾಗಗಳಲ್ಲಿ ಸೇವೆಗಳ ವಿಶೇಷವನ್ನು ವಿವರಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ಪೋಸ್ಟ್ ಆಫೀಸ್ PPF ಯೋಜನೆ;

ಈ ರೀತಿಯ ಕಾರ್ಯಕ್ರಮಗಳು ಗ್ರಾಮೀಣ ಹಾಗೂ ಮಂಡಲ ವಲಯದಲ್ಲಿ ಜನರಿಗೆ ಜಾಗೃತಿಯನ್ನು ಮೂಡಿಸುತ್ತದೆ, PPF ಖಾತೆಯ ಬಗ್ಗೆ ಮಾಹಿತಿ ನೀಡಲಾಗುತ್ತದೆ, ಈ ರೀತಿಯ ಯೋಜನೆಯನ್ನು ಸೇರಲು ಜನರಿಗೆ ಪ್ರೋತ್ಸಾಹಿಸಲಾಗುತ್ತದೆ. PPF ಎಂದರೆ ಒಂದು ಸಾರ್ವಜನಿಕ ಭವಿಷ್ಯ ನಿಧಿ. ಇದು ಸಾರ್ವಜನಿಕ ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿ ನೀವು ಶೆ.7.1 ಎಷ್ಟು ಬಡ್ಡಿದರವನ್ನು ಪಡೆಯಬಹುದು.

ಪೋಸ್ಟ್ ಆಫೀಸ್ PPF ಯೋಜನೆ;

ಈ ಯೋಜನೆಯ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯವೇನೆಂದರೆ, ಹೂಡಿಕೆ ಮಾಡುವವರು 15 ವರ್ಷಗಳವರೆಗೆ ಹೂಡಿಕೆ ಮಾಡಲೇಬೇಕು. ಅದರ ನಂತರ ನೀವು ಹೂಡಿಕೆ ಮಾಡಿದ ಹಣ ಮತ್ತು ಬಡ್ಡಿಯನ್ನು ಹಿಂಪಡೆಯಬಹುದು. ನೀವು ಹೂಡಿಕೆ ಮಾಡಿದ ಮೊತ್ತ ಮತ್ತು ಬಡ್ಡಿಗೆ ಯಾವುದೇ ತೆರಿಗೆ ಇರುವುದಿಲ್ಲ. ಅಂದರೆ ನೀವು ಈ ಯೋಜನೆಯಲ್ಲಿ ಸಂಪೂರ್ಣ ತೆರಿಗೆ ವಿನಾಯಿತಿ ಪಡೆಯಬಹುದು.

ಪೋಸ್ಟ್ ಆಫೀಸ್ PPF ಯೋಜನೆ;

ನೀವು ಹತ್ತಿರವಿರುವ ಪೋಸ್ಟ್ ಆಫೀಸ್ಗೆ(Post Office) ಭೇಟಿ ನೀಡಿ ಈ ಯೋಜನೆಯನ್ನು ಸೇರಬಹುದು, ₹500ರಿಂದ ಖಾತೆಯನ್ನು ತೆರೆಯಬಹುದು. ನಂತರ ನೀವು ಪ್ರತಿ ತಿಂಗಳು ಠೇವಣಿ ಇಡಬಹುದು ಗರಿಷ್ಠ 1.5 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಪ್ರತಿ ಐದು ವರ್ಷಗಳಿಗೊಮ್ಮೆ ಯೋಜನೆಯ ಅವಧಿಯನ್ನು ವಿಸ್ತರಿಸಬಹುದು. ನೀವು ಎಷ್ಟು ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿರು ಅದರ ಅನುಗುಣವಾಗಿ ಆದಾಯವನ್ನು ಪಡೆಯುವಿರಿ.

ಪೋಸ್ಟ್ ಆಫೀಸ್ PPF ಯೋಜನೆ;

ಈ ಯೋಜನೆಯಲ್ಲಿ ನಿಮ್ಮ ಮಗುವಿನ ಹೆಸರಿನಲ್ಲಿಯೂ ಕೂಡ ಖಾತೆಯನ್ನು ತೆರೆಯಬಹುದು, ಪ್ರತಿ ತಿಂಗಳು 5 ಸಾವಿರ ಹೂಡಿಕೆ ಮಾಡಿ, ಮೆಚುರಿಟಿ ಅವಧಿಯ ಕೊನೆಯಲ್ಲಿ 16 ಲಕ್ಷಕ್ಕೂ ಹೆಚ್ಚಿನ ಮೊತ್ತವನ್ನು ಹಿಂಪಡೆಯುವಿರಿ.

 

 

Leave a Comment

WhatsApp Group Join Now
Telegram Group Join Now