Ration: ರಾಜ್ಯದ ಲಕ್ಷಾಂತರ ಜನರಿಗೆ ಶಾಕ್! ಫೆಬ್ರವರಿ 15ರಿಂದ ಇವರಿಗೆ ಮಾತ್ರ ಸಿಗಲಿದೆ ರೇಷನ್
ರಾಜ್ಯದ ಜನರಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಭಾರತ ಸರ್ಕಾರವು ಕಡಿಮೆ ದರದಲ್ಲಿ ಮತ್ತು ಉಚಿತವಾಗಿ ಪಡಿತರ ವಿತರಿಸುತ್ತಿದೆ, ಫಲಾನುಭವಿಗಳು ಈ ಒಂದು ಕೆಲಸ ಮಾಡಿಸಿಕೊಳ್ಳದಿದ್ದರೆ ಫೆ.15 ರಿಂದ ಪಡಿತರ ಸಿಗುವುದು ಅನುಮಾನ.
ಕೇಂದ್ರ ಸರ್ಕಾರವು ದೇಶದ ಜನತೆಗೆ ಹಲವು ಯೋಜನೆಗಳನ್ನು ನೀಡುತ್ತಾ ಬಂದಿದೆ, ಕೇಂದ್ರದ ಈ ಒಂದು ಯೋಜನೆಯಿಂದ ದೇಶದ ಕೋಟ್ಯಂತರ ಜನರು ಲಾಭವನ್ನು ಪಡೆದುಕೊಳ್ಳುತ್ತಾರೆ, ಜನರು ಹಸಿವಿನಿಂದ ಬಳಲಬಾರದು ಎಂದು ಕೇಂದ್ರ ಸರ್ಕಾರವು ಉಚಿತವಾಗಿ ಪಡಿತರವನ್ನು ವಿತರಣೆ ಮಾಡುತ್ತಿದೆ.
ಭಾರತದಲ್ಲಿ ಇಂದಿಗೂ ಹಲವಾರು ಜನರು ಎರಡು ಹೊತ್ತಿನ ಊಟಕ್ಕೆ ಕಷ್ಟ ಪಡುತ್ತಿದ್ದಾರೆ, ಬಡವರ್ಗದ ಜನರಿಗಾಗಿಯೇ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಭಾರತ ಸರ್ಕಾರವು ಕಡಿಮೆ ದರದಲ್ಲಿ ಮತ್ತು ಉಚಿತವಾಗಿ ಪಡಿತರ ವಿತರಿಸುತ್ತಿದೆ, ಈ ಯೋಜನೆಯ ದೇಶದ ಎಲ್ಲಾ ಬಡವರ್ಗದ ಜನರಿಗೆ ಅನ್ವಯಿಸುತ್ತದೆ.
ಪಡಿತರ ಚೀಟಿ ಹೊಂದಿರುವ ಜನರಿಗೆ ಮಾತ್ರ ಕಡಿಮೆ ದರದಲ್ಲಿ ಆಹಾರ ಧಾನ್ಯಗಳನ್ನು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿ ವಿತರಿಸಲಾಗುತ್ತದೆ, ಇದೀಗ ಪಡಿತರ ಚೀಟಿ ಹೊಂದಿದವರಿಗೆ ಕೇಂದ್ರ ಸರ್ಕಾರವು ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ, ಈ ಮಾರ್ಗ ಸೂಚಿಯನ್ನು ಪಾಲಿಸದೆ ಇದ್ದವರಿಗೆ ಫೆ.15 ರಿಂದ ಪಡಿತರ ಸಿಗುವುದಿಲ್ಲ.
ಇ-ಕೆವೈಸಿ ಮಾಡಿಸಿಕೊಳ್ಳೋದು ಹೇಗೆ?
ಪಡಿತರ ಚೀಟಿಯ E-KYCE ಅಪ್ಡೇಟ್ ಮಾಡಲು ನೀವು ಹತ್ತಿರವಿರುವ ಆಹಾರ ಪೂರೈಕೆ ಕೇಂದ್ರಕ್ಕೆ ಭೇಟಿ ನೀಡಿ ಅಪ್ಡೇಟ್ ಮಾಡಿಕೊಳ್ಳಬಹುದು. E-KYC ಮಾಡಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ, ನೀವು ಆನ್ಲೈನ್ ಮೂಲಕವು ಕೂಡ E-KYC ಅಪ್ಡೇಟ್ ಮಾಡಿಕೊಳ್ಳಬಹುದು.