ಕೇಂದ್ರದಿಂದ ರೈತರಿಗೆ ಗುಡ್‌ ನ್ಯೂಸ್: ಕೃಷಿ ಭೂಮಿಯಲ್ಲಿ ಮರ ಕಡಿಯಲು ನಿಯಮವನ್ನು ಸರಳೀಕೃತ

ನವದೆಹಲಿ: ಕೃಷಿ ಭೂಮಿಯಲ್ಲಿ ಮರಗಳಿದ್ದಲ್ಲಿ ಅಥವಾ ಬೆಳೆಗಳಿಗೆ ತೊಂದರೆ ಉಂಟುಮಾಡುವ ಮರಗಳಿದ್ದಲ್ಲಿ ಅವುಗಳನ್ನು ಕಡಿಯಲು ಸಾಕಷ್ಟು ನಿಯಮಗಳ ಪಾಲನೆ ಮಾಡಬೇಕಿತ್ತು. ಆದರೆ ಇದೀಗ ಕೇಂದ್ರ ಸರ್ಕಾರವು ರೈತರ ಹಿತದೃಷ್ಟಿಯಿಂದ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದು, ಕೃಷಿ ಭೂಮಿಯಲ್ಲಿ ಮರ ಕಡಿಯಲು ನಿಯಮವನ್ನು ಸರಳೀಕೃತಗೊಳಿಸಿದೆ.
ಈ ಸಂಬಂದ ಪರಿಸರ ಸಚಿವಾಲಯವು ಎಲ್ಲಾ ರಾಜ್ಯ ಸರ್ಕಾರಗಳಿಗೆ ಪತ್ರ ಕಳುಹಿಸಿದ್ದು, ಕೃಷಿ ಭೂಮಿಯಲ್ಲಿರುವ ಮರಗಳನ್ನು ಕಡಿಯಲು ಅಥವಾ ಬೆಳೆಗಳಿಗೆ ತೊಂದರೆ ಉಂಟು ಮಾಡುವ ಮರಗಳನ್ನು ಕಡಿಯುವುದನ್ನು ಸುಲಭವಾಗಿಸಲು ಕೇಂದ್ರ ಸರ್ಕಾರ ಮಾದರಿ ನಿಯಮಗಳನ್ನು ಹೊರಡಿಸಿದೆ. ಇದು ರೈತರ ಆದಾಯವನ್ನು ದ್ವಿಗುಣಗೊಳಿಸುವುದರ ಜೊತೆಗೆ ಪರಿಸರ ಸಂರಕ್ಷಿಸಲು ಸಹಾಯ ಮಾಡುತ್ತದೆ. ಕಾಡುಗಳ ಹೊರಗೆ ಮರಗಳ ಹೊದಿಕೆಯನ್ನು ಹೆಚ್ಚಿಸಲು ಹವಾಮಾನ ಬದಲಾವಣೆಯನ್ನು ತಗ್ಗಿಸಲು, ಮರದ ಆಮದನ್ನು ಕಡಿಮೆ ಮಾಡುವ ದೃಷ್ಟಿಯಿಂದ ಸರ್ಕಾರವು ಕೃಷಿ ಅರಣ್ಯೀಕರಣವನ್ನು ಉತ್ತೇಜಿಸಿದ್ದು, ರೈತರ ಆದಾಯವನ್ನು ದ್ವಿಗುಣಗೊಳಿಸುವುದು ಇದರ ಮುಖ್ಯು ಉದ್ದೇಶವಾಗಿದೆ. ಇದು ಪ್ಯಾರೀಸ್‌ ಒಪ್ಪಂದದಡಿಯಲ್ಲಿ ಭಾರತದ ಹವಾಮಾಣ ಗುರಿಗಳನ್ನೂ ಸಹ ಬೆಂಬಲಿಸುತ್ತದೆ.
೧೦ಕ್ಕಿಂತ ಹೆಚ್ಚು ಮರಗಳನ್ನು ಕಡಿಯಲು ಭೂಮಿ ಮಾಲೀಕರು ಎನ್‌ಟಿಎಮ್‌ಎಸ್‌ ಪೋರ್ಟಲ್‌ ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಈ ವೇಳೆ ಕಡಿಯುವ ಮರಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ಪ್ರತಿ ಮರವನ್ನು ಜಿಯೋ-ಟ್ಯಾಗ್‌ ಮಾಡಿ ಫೋಟೋ ತೆಗೆದು ಅಪ್ಲೋಡ್‌ ಮಾಡಬೇಕು. ಮರಗಳನ್ನು ಕಡಿಯಲು ಮತ್ತು ಸಾಗಾಣಿಕೆ ಮಾಡಲು ಅನುಮತಿ ಪತ್ರದ ಅಗತ್ಯವಿದ್ದು, ಅರಣ್ಯ, ಕೃಷಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಅಧಿಕಾರಿಗಳು ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲಿದ್ದಾರೆ.

Leave a Comment